ರಚನ: ಪುರಂದರದಾಸರು

ಯಾದವ  ನೀ  ಬಾ  ಯದುಕುಲನಂದನ
ಮಾಧವ  ಮಧುಸೂದನ  ಬಾರೊ || ಪ ||
ಸೋದರಮಾವನ  ಮದುರಲಿ  ಮಡಹಿದ
ಯಶೋದೆ  ಕಂದೆ ನೀ  ಬಾರೊ || ಅ. ಪ. ||

ಕನಕಾಲಂದಗಿ  ಘುಲು  ಘುಲು ಯೆನುತಲಿ
ಝಣಝಣ  ವೆನುತಿಹ  ನಾದಗಳು |
ಚಿಣಿಕೊಳು  ಚೆಂಡು  ಬುಗರೆಯನಾಡುತ
 ಸಣ್ಣ  ಸಣ್ಣ  ಗೊವಳರೊಡಿ  ಬಾರೊ || ೧ ||

ಶಂಖ  ಚಕ್ರವು  ಕೈಯಲಿ  ಹೊಳಿಯುತ
ಬಿಂಕದ ಕೋವಲ ನೀ  ಬಾರೊ |
ಅಕಳಂಕ  ಮಹಿಮನೆ  ಆದಿನಾರಾಯಣ
ಬೇಗಂಪೆ  ಭಕುತರಿಗೊಲಿ  ಬಾರೊ || ೨ ||

ಖಗವಾಹನನೆ  ಬಗೆಬಗೆರೂಪನೆ
ನಗೆಮೊಗದರುಶನೆ  ನೀ  ಬಾರೊ |
ಜಗದೊಳು  ನಿನ್ನಯ  ಮಹಿಮೆಯ  ಪೊಗಳುವ
ಪುರಂದರವಿಠ್ಠಲ  ನೀ  ಬಾರೊ || ೩ ||

 ಗಾಯನ 
ಪಂ. ಭೀಮಸೇನ ಜೋಷಿಯವರು ಹಾಡಿದ ಪದ, ಯೂಟ್ಯೂಬ್ ನಲ್ಲಿ
ಬೋಂಬೇ  ಜೈಶ್ರೀ ಅವರು ಹಾಡಿದ ಪದ, ಯೂಟ್ಯೂಬ್ ನಲ್ಲಿ

ವರ್ಗ: ಪುರಂದರದಾಸ ಸಾಹಿತ್ಯ